ಸಂಕ್ಷಿಪ್ತ ವಿವರಣೆ:
- ಜನಸೇವಕ ಕರ್ನಾಟಕ ಸರ್ಕಾರದ ಯೋಜನೆಯಾಗಿದ್ದು, ರಾಜ್ಯದ ನಾಗರಿಕರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳನ್ನು ತಲುಪಿಸಿ ಅವರ ದೈನಂದಿನ ಜೀವನವನ್ನು ಸುಗಮಗೊಳಿಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.ಈ ಯೋಜನೆಯು ಪ್ರಸ್ತುತ 8 ಇಲಾಖೆಗಳ ವ್ಯಾಪ್ತಿಯಲ್ಲಿ 58 ಸರ್ಕಾರದ ಸೇವೆಗಳನ್ನು ನಾಗರಿಕರಿಗೆ ಒದಗಿಸುತ್ತಿದೆ.
- ಈ ಯೋಜನೆಯನ್ನು ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯ( ಇಡಿಸಿಎಸ್) ಕರ್ನಾಟಕ ಸರ್ಕಾರ, ಜಾರಿಗೊಳಿಸಿದೆ.
- ನಾಗರಿಕರು ಕರೆ ಕೇಂದ್ರ (080-44554455) ಅಥವಾ ಜನಸೇವಕ ಜಾಲತಾಣ (www.janasevaka.karnataka.gov.in) ಅಥವಾ ಮೊಬೈಲ್ ಆಪ್ (ಮೊಬೈಲ್ ಒನ್) ಮೂಲಕ ಸ್ಲಾಟ್ ಬುಕ್ ಮಾಡಬಹುದು.ಜನಸೇವಕರು ಅಗತ್ಯವಿರುವ ಎಲ್ಲಾ ಯಂತ್ರಾಂಶಗಳನ್ನು ಹೊಂದಿದ್ದು, ಅರ್ಜಿಯನ್ನು ಸಂಗ್ರಹಿಸಲು ನಿರ್ದಿಷ್ಟ ಸಮಯದಲ್ಲಿ ನಾಗರಿಕರ ಮನೆ ಬಾಗಿಲಿಗೆ ಭೇಟಿ ನೀಡುತ್ತಾರೆ.ಅರ್ಜಿಗಳ ಸಕಾಲಿಕ ವಿಲೇವಾರಿಯನ್ನು ಖಚಿತಪಡಿಸಿಕೊಳ್ಳಲು ಜನಸೇವಕವನ್ನು ಸಕಾಲದೊಂದಿಗೆ (ನಾಗರಿಕ ಸೇವಾ ಖಾತರಿ ಅಧಿನಿಯಮ) ಸಂಯೋಜಿಸಲಾಗಿದೆ.ಅನುಮೋದನೆಗೊಂಡ ನಂತರ, ಸೇವೆ/ದಾಖಲೆಗಳನ್ನು ತಲುಪಿಸಲು ಜನಸೇವಕರು ನಾಗರಿಕರ ಮನೆ ಬಾಗಿಲಿಗೆ ಭೇಟಿ ನೀಡುತ್ತಾರೆ.
- ಜನಸೇವಕ ಯೋಜನೆಯು ಮಾರ್ಚ್ 2, 2019 ರಂದು ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 5 ಸೇವೆಗಳೊಂದಿಗೆ ಪ್ರಾರಂಭವಾಯಿತು. ಈ ಯೋಜನೆಯನ್ನು ಫೆಬ್ರವರಿ 4, 2020 ರಂದು ರಾಜಾಜಿನಗರ, ಮಹದೇವಪುರ ಮತ್ತು ಬೊಮ್ಮನಹಳ್ಳಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳು ಉದ್ಘಾಟಿಸಿದರು. ಈ ಹಂತದಲ್ಲಿ ಈ ಯೋಜನೆಗೆ ಇನ್ನೂ 48 ಸೇವೆಗಳನ್ನು ಸೇರಿಸಲಾಯಿತು. 5 ಹೆಚ್ಚಿನ ಸೇವೆಗಳನ್ನು ಜೊತೆಗೆ ಹೊಸ ವಿಧಾನಸಭಾ ಕ್ಷೇತ್ರವನ್ನು(ಯಶವಂತಪುರ) ಜನವರಿ 2021 ರಂದು ಸೇರಿಸಲಾಯಿತು, ಈಗ ಒಟ್ಟು 58 ಸೇವೆಗಳು ಲಭ್ಯವಿದೆ. ಇಲ್ಲಿಯವರೆಗೆ ಈ 5 ಕ್ಷೇತ್ರಗಳಲ್ಲಿ ಈಗಾಗಲೇ 95,000 ಕ್ಕೂ ಹೆಚ್ಚು ಅರ್ಜಿಗಳನ್ನು ಜನಸೇವಕ ಮೂಲಕ ಸಂಗ್ರಹಿಸಲಾಗಿದೆ.
- ಕೋವಿಡ್-19 ಸಾಂಕ್ರಾಮಿಕ ರೋಗದ ಮೊದಲ ಅಲೆಯ ಸಮಯದಲ್ಲಿ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿತ್ತು.ಎಲ್ಲಾ ಕೋವಿಡ್ -19 ಸುರಕ್ಷತಾ ಪ್ರೋಟೋಕಾಲ್ಗಳನ್ನು ಅಳವಡಿಸಿಕೊಂಡು ಬದಲಾದ ಕಾರ್ಯತಂತ್ರದೊಂದಿಗೆ 18 ಜನವರಿ 2021 ರಂದು ಯೋಜನೆಯನ್ನು ಪುನರಾರಂಭಿಸಲಾಯಿತು.ಜನಸೇವಕರು ಕೋವಿಡ್ -19 ಎರಡನೇ ಹಂತದಲ್ಲಿ ನಾಗರಿಕರ ಅಗತ್ಯಗಳನ್ನು ಬಹಳ ಪರಿಣಾಮಕಾರಿಯಾಗಿ ಪೂರೈಸಿದರು ಮತ್ತು ಅದೇ ರೀತಿ ಸೇವೆಗಳನ್ನು ನಾಗರಿಕರ ಮನೆ ಬಾಗಿಲಿಗೆ ತಲುಪಿಸಿದರು.
ಯೋಜನೆಯ ಪ್ರಮುಖ ವಿವರಗಳು:
- ಸೇವಾ ಶುಲ್ಕ : ರೂ.115+ ಇಲಾಖೆ ಶುಲ್ಕ +ಮುದ್ರಣ ಶುಲ್ಕಗಳು ಅನ್ವಯವಾಗುವಂತೆ
- ನಾಗರಿಕರು ಅನುಕೂಲಕರ ಸಮಯದ ಪ್ರಕಾರ 8AM ರಿಂದ 8PM ನಡುವೆ ಎಲ್ಲಾ ದಿನಗಳಲ್ಲಿ ಸ್ಲಾಟ್ ಬುಕ್ ಮಾಡಬಹುದು.
- ಪ್ರತಿ ಸೇವೆಯ ವಿತರಣೆಯ ನಂತರ ನಾಗರಿಕರಿಂದ ಮರುಸ್ಪಂದನೆ ಪಡೆಯಲಾಗುತ್ತದೆ, ಇದು ಅತಿಯಾದ ಶುಲ್ಕ, ತಪ್ಪಾದ ವರ್ತನೆ ಮತ್ತು ಭೇಟಿಗಳಲ್ಲಿ ವಿಳಂಬವನ್ನು ತಪ್ಪಿಸಲು ಅನುಕೂಲವಾಗುತ್ತದೆ.
ನಾಗರಿಕರಿಗೆ ಪ್ರಯೋಜನಗಳು:
- ಸೇವೆಗಳನ್ನು ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಥವಾ ನಾಗರಿಕ ಸೇವಾ ಕೇಂದ್ರಗಳಿಗೆ ಪ್ರಯಾಣಿಸುವ ಸಮಯ ಮತ್ತು ಹಣವನ್ನು ಉಳಿಸಬಹುದು.ಈ ಯೋಜನೆಯು ವಿಶೇಷವಾಗಿ ಹಿರಿಯ ನಾಗರಿಕರು, ದೈಹಿಕ ಅಂಗವಿಕಲರು ಇತ್ಯಾದಿಗಳಿಗೆ ಸಹಾಯವಾಗುತ್ತದೆ.
- ದುಡಿಯುವ ಜನಸಂಖ್ಯೆಯು ಜೀವನೋಪಾಯದ ನಷ್ಟದ ರೂಪದಲ್ಲಿ ಅವಕಾಶದ ವೆಚ್ಚವನ್ನು ಕಳೆದುಕೊಳ್ಳುವ ಅಗತ್ಯವಿಲ್ಲ.
- ಸೇವೆಗಳನ್ನು ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ.
- ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ.
- ಸೇವೆಗಳನ್ನು ಪಡೆಯಲು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ.
- ಕೋವಿಡ್ -19 ಸಾಂಕ್ರಾಮಿಕದ ನಡುವೆ ಉತ್ತಮ ಸೇವಾ ವಿತರಣಾ ಚಾನೆಲ್ ಎಂದು ಸಾಬೀತಾಗಿದೆ.
ಜನಸೇವಕ ಯೋಜನೆಯಡಿಯಲ್ಲಿರುವ ಇಲಾಖೆಗಳು ಮತ್ತು ಸೇವೆಗಳು:
ಪ್ರಸ್ತುತ 8 ಇಲಾಖೆಗಳ 58 ಸೇವೆಗಳನ್ನು ಜನಸೇವಕ ಯೋಜನೆಯಡಿಯಲ್ಲಿ ಪಡೆಯಬಹುದು.
- ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(UIDAI)- 4 ಸೇವೆಗಳು (ಆಧಾರ್ ನವೀಕರಣ)
- ಕಂದಾಯ ಇಲಾಖೆ - 21 ಸೇವೆಗಳು(ಆದಾಯ ಪ್ರಮಾಣಪತ್ರ,ಜಾತಿ ಪ್ರಮಾಣಪತ್ರ,ವೃದ್ಯಾಪ್ಯ ವೇತನ,ವಿಧವೆ ಪಿಂಚಣಿ,ಸಂಧ್ಯಾ ಸುರಕ್ಷಾ ಯೋಜನೆ,ದೈಹಿಕವಾಗಿ ಅಂಗವಿಕಲ ಪಿಂಚಣಿ ಇತ್ಯಾದಿ)
- ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ- 9 ಸೇವೆಗಳು (ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಫಲಾನುಭವಿಯಾಗಿ ನೋಂದಾಯಿಸುವ ಅರ್ಜಿ, ಮುಂದುವರಿಕೆಗಾಗಿ ಅರ್ಜಿ
- ಮುಂದಿನ ಒಂದು / ಮೂರು ವರ್ಷದವರೆಗೆ ಅಸ್ಥಿತ್ವದಲ್ಲಿರುವ ನೋಂದಣಿಯನ್ನು ಮುಂದುವರೆಸುವುದಕ್ಕಾಗಿ ಅರ್ಜಿ,ಮದುವೆ ಸಹಾಯಕ್ಕಾಗಿ ಅರ್ಜಿ,ಶೈಕ್ಷಣಿಕ ಸಹಾಯಕ್ಕಾಗಿ ಅರ್ಜಿ,ಪಿಂಚಣಿಗಾಗಿ ಅರ್ಜಿ)
- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) - 18 ಸೇವೆಗಳು (ಖಾತಾ ವರ್ಗಾವಣೆ,ಖಾತಾ ಒಂದುಗೂಡಿಸುವಿಕೆ ಇತ್ಯಾದಿ)
- ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ- 1 ಸೇವೆ (ಹಿರಿಯ ನಾಗರಿಕರ ಗುರುತಿನ ಚೀಟಿ)
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು- 1 ಸೇವೆ (ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಗುರುತಿನ ಚೀಟಿ)
- ಕರ್ನಾಟಕ ರಾಜ್ಯ ಪೊಲೀಸ್ - 3 ಸೇವೆಗಳು ( ಪೊಲೀಸ್ ಪರಿಶೀಲನಾ ಪ್ರಮಾಣಪತ್ರಗಳು)
- ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ - 1 ಸೇವೆ (ಎಪಿಎಲ್ ಕಾರ್ಡ್ )
ಬಳಕೆದಾರರ ಕಾರ್ಯವಿಧಾನ: